ಅನ್ಯಶಿಲೆ
	ಅಗ್ನಿಶಿಲೆಯಲ್ಲಿ ಕಂಡುಬರುವ ಅನ್ಯ ಜಾತಿಯ ಶಿಲೆ (ಸೆûನೊಲಿತ್). ಇವು ಸಾಮಾನ್ಯವಾಗಿ ತಿಳಿಬಣ್ಣದ ಗ್ರಾನೈಟ್‍ಗಳಲ್ಲಿ ಕಪ್ಪನೆಯ ತೇಪೆಗಳಂತೆ ಕಂಡುಬರುತ್ತದೆ. ಇವು ಗಾತ್ರದಲ್ಲಿ ಬಹುಸೂಕ್ಷ್ಮವಾದ ಛಿದ್ರಗಳಿಂದ ಹಿಡಿದು ಹಲವಾರು ಅಡಿಗಳಷ್ಟು ದೊಡ್ಡವಾಗಿರುವುದೂ ಉಂಟು. ಭೂಗರ್ಭದಿಂದ ಮ್ಯಾಗ್ಮ ಮೇಲ್ಪದರಗಳಲ್ಲಿರುವ ಶಿಲೆಗಳ ಮೂಲಕ ತೂರಿ ಬರುವಾಗ, ಅಕ್ಕಪಕ್ಕದಲ್ಲಿರುವ ಶಿಲೆಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಒಡೆದುಚೂರಾಗುತ್ತವೆ. ಹಲ ಕೆಲವು ಚೂರುಗಳು ಹಾದು ಮೇಲಕ್ಕೆ ಹೋಗುತ್ತಿರುವ ಮ್ಯಾಗ್ಮದೊಡನೆ ಸೇರಿ ಅನ್ಯಶಿಲೆಯಾಗಿ ಕಾಣಿಸಿಕೊಳ್ಳುತ್ತವೆ. ಇವು ಅಗ್ನಿ, ಜಲಜ ಅಥವಾ ರೂಪಾಂತರ ಶಿಲಾವರ್ಗಕ್ಕೆ ಸೇರಿರಬಹುದು. ಅನೇಕ ಬಾರಿ ಅನ್ಯಶಿಲೆ ಮತ್ತು ಅದನ್ನು ಒಳಗೊಂಡಿರುವ ಅಗ್ನಿಶಿಲೆ ಇವುಗಳ ನಡುವೆ ಪರಸ್ಪರ ಬದಲಾವಣೆಗಳಾಗಿ ಕ್ರಮೇಣ ಅನ್ಯಶಿಲೆ ಅಗ್ನಿಶಿಲೆಯ ರೂಪರೇಷೆಗಳನ್ನೇ ಹೋಲುವುದೂ ಉಂಟು.		
(ಎಸ್.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ